ನಮ್ಮದು ಜನರ ಪರ ಕಾಳಜಿ


ಪ್ರಸ್ತುತ ದಿನಮಾನಗಳಲ್ಲಿ ಬಹುತೇಕ ಎಲ್ಲರೂ ಆಹಾರ ಉತ್ಪನ್ನಗಳನ್ನು ಸ್ವಾಧಭರಿತವಾಗಿ ಬಳಸುವಂತಾಗಿದೆ. ರಾಸಾಯನಿಕ ಪದಾರ್ಥವನ್ನು ಭೂಮಿಗೆಸೆದು ಯಾವುದೇ ಬೆಳೆಯಾದರೂ ಹೆಚ್ಚಿನ ಇಳುವರಿ ಸಹಿತ ಬೇಗನೆ ಬೆಳೆಯನ್ನು ಬೆಳೆಯುವುದು, ಕಟಾವು ಮಾಡಿ ಮಾರಾಟ ಮಾಡುವುದು ಸಹಜವಾಗಿಬಿಟ್ಟಿದೆ. ಇಂತಹದ್ದನ್ನು ನಾವು ಉಪಯೋಗಿಸುತ್ತೇವೆ. ಇದರಿಂದ ನಮ್ಮಗಳ ಆರೋಗ್ಯದ ಗತಿ...! ಹದಗೆಡುವುದು ಖಂಡಿತ.

ಆದರೆ ಇಂತಹ ಅಪಾಯಕಾರಿ ಅಂಶಗಳನ್ನು ಕಂಡಿರುವ ನಾವು ನಮ್ಮ ಗ್ರಾಹಕರಿಗೆ ಸಾವಯುವ ಕೃಷಿಯ ಮುಖೇನ ಬೆಳೆದಂತಹ ಶುದ್ದ ಪೌಷ್ಟಿಕ ಮತ್ತು ರಾಸಾಯನಿಕ ಮುಕ್ತ ಆಹಾರ ಪದಾರ್ಥಗಳನ್ನು ಒದಗಿಸುವ ಉತ್ಕಷ್ಟ ಆಸೆ ಮತ್ತು ಆಸಕ್ತಿಯನ್ನು ಹೊಂದಿದ್ದೇವೆ. ಈ ಕಾರಣಕ್ಕೆ ನಾವು “ನಳ ಆರ್ಗಾನಿಕ್ ಸಂಸ್ಥೆ” ಎನ್ನುವ ಮಾರ್ಕೆಟಿಂಗ್ ಸಂಸ್ಥೆಯನ್ನು ಆರಂಭಿಸಿದ್ದೇವೆ.

ನಮ್ಮ ಸಂಸ್ಥೆಯು ಭೂಮಿತಾಯಿ ಸಾವಯವ ಕೃಷಿ ಬೆಳೆಗಾರರ ಸಹಯೋಗದಲ್ಲಿ ನಮ್ಮ “ನಳ ಸಂಸ್ಥೆಯು ಪ್ರಾಮಾಣಿಕವಾಗಿ ಮತ್ತು ರೈತರನ್ನು ನೈಸರ್ಗಿಕವಾಗಿ ಕೃಷಿಯೆಡೆಗೆ ಕರೆತಂದು ಅವರನ್ನು ಉತ್ತೇಜಿಸುವುದು ಹಾಗೂ ಅವರುಗಳು ಬೆಳೆದ ಯಾವುದೇ ಬಗೆಯ ಪರಿಶುದ್ಧ ಆಹಾರ ಬೆಳೆಗೆ ಅಗತ್ಯ ಮಾರುಕಟ್ಟೆಯನ್ನು ಒದಗಿಸುವ ಶುದ್ಧ ಕಾರ್ಯಕ್ಕೆ ನಮ್ಮ “ನಳ ಆರ್ಗಾನಿಕ್ ಸಂಸ್ಥೆ”ಯು ಶರವೇಗದಲ್ಲಿ ಮುನ್ನುಗ್ಗುತ್ತಿದೆ.

ನಮ್ಮ ಕೆಲವು ರೈತಾಪಿ ಜನರು ಅಧಿಕ ಇಳುವರಿ ಪಡೆಯುವುದಕ್ಕೆ ರಸಗೊಬ್ಬರಗಳು, ಕ್ರಿಮಿನಾಶಕವನ್ನು ಸುಲಭ ಮಾರ್ಗದಲ್ಲಿ ಉಪಯೋಗಿಸುತ್ತಿದ್ದು ಇದರಿಂದ ಜನರ ಆರೋಗ್ಯ ಸಂಬಂಧಿತ ಸಮಸ್ಯೆಗಳು ಉಲ್ಬಣಗೊಳ್ಳುತ್ತಿದೆ. ಇದಕ್ಕೆ ಆದಷ್ಟೂ ಕಡಿವಾಣ ಹಾಕಿ ಜಗವು ಹೇಳುವ 'ಅನ್ನದಾತ ರೈತ' ರೆಂಬ ಮಾತನ್ನು ನಿತ್ಯ ಮತ್ತು ಸತ್ಯವಾಗಿಸಿಕೊಳ್ಳಲೇಬೇಕಾದ ಅಗತ್ಯವಿದೆ.

ರಸಗೊಬ್ಬರ ಬಳಸಿ ಬೆಳೆದ ಬೆಳೆಗಳಿಂದ ಮಕ್ಕಳು, ಮಹಿಳೆಯರಿಗೆ ಅನಾರೋಗ್ಯ ಸೃಷ್ಟಿಯಾದರೆ ಹಿರಿಯ ನಾಗರೀಕರಿಗೆ ಸಕ್ಕರೆ ಖಾಯಿಲೆ, ಬಿಪಿ, ಬೊಜ್ಜು ಬೆಳೆಯುವಿಕೆ ಇತ್ಯಾದಿ ಮಾರಕ ರೋಗಗಳ ಸೃಷ್ಟಿಗೆ ಕಾರಣವಾಗುತ್ತಿರುವುದು ಕಂಡು ಬರುತ್ತಿದೆ. ಈ ಬಗೆಗೆ ನಮ್ಮ ರೈತರಿಗೆ ಅಗತ್ಯ ಮಾಹಿತಿ ನೀಡಿ ಅಂತಹವರನ್ನು ಕಲುಷಿತ ಬೇಸಾಯ ಪದ್ಧತಿಯಿಂದ ಹೊರತರುವ ಮೂಲಕ ಕೃಷಿಕರನ್ನು ಜಾಗೃತಗೊಳಿಸಿ ನಾಗರೀಕ ಸಮಾಜದ ಎಲ್ಲರ ಆರೋಗ್ಯ ಸುಧಾರಣೆಗಾಗಿ ಮತ್ತು ನಮ್ಮ ಪವಿತ್ರ ಭೂಮಿಯ ಫಲವತ್ತತೆಗಾಗಿ ನಾವು ಮುಂದಾಗಿದ್ದೇವೆ.

ಭರವಸೆ: ಎಲ್ಲರಿಗೂ ಒಂದು ಭರವಸೆ ನೀಡಲು ಮುಂದಾಗಿರುವ ನಾವು ಅತ್ಯುತ್ತಮವಾದ ಆರೋಗ್ಯಪೂರ್ಣ, ರಾಸಾಯನಿಕ ಮುಕ್ತ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಈಗಾಗಲೇ ಮುಂದಾಗಿದ್ದು ನೈಸರ್ಗಿಕವಾದ ಸಾವಯವ ಪದ್ಧತಿಯಿಂದ ಬೆಳೆಗಳನ್ನು ಬೆಳೆಸಿ, ಕಳಪೆಯಾಗದ ಮತ್ತು ದೋಷರಹಿತ ಉತ್ಕಷ್ಟ ಆಹಾರ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುವ ನಿಖರ ಕರ್ತವ್ಯ ಮತ್ತು ಇರಾದೆ ಹೊಂದಿದ್ದು ಇದಕ್ಕಾಗಿ ಭರವಸೆ ದೃಢಪಡಿಸಲಿಚ್ಚಿಸುತ್ತೇವೆ.

ವಾಗ್ದಾನ: ನಮ್ಮ ಸಂಸ್ಥೆಯಿಂದ ನಿಮಗೆ ಯಾವುದೇ ರೀತಿಯ ಕಳಪೆ ಮತ್ತು ದೋಷಪೂರಿತ ಆಹಾರ ಉತ್ಪನ್ನಗಳನ್ನು ನಾವು ನಿಮಗೆ ನೀಡುವುದಿಲ್ಲ ಎಂಬ ನಂಬುಗೆಯನ್ನು ಅಧಿಕೃತವಾಗಿ ಖಾತ್ರಿ ಪಡಿಸಲು ಬಯಸುತ್ತೇವೆ. ರೈತರನ್ನು ನೇರವಾಗಿ ವಾಣಿಜ್ಯ ಬೆಳೆಗಳನ್ನು ಬೆಳೆಯುವತ್ತ ಉತ್ತೇಜಿಸುವುದು ಹಾಗೂ ಅದನ್ನು ಮಾರುಕಟ್ಟೆಗೆ ಸೂಕ್ತ ಮಾರ್ಗದರ್ಶನ ನೀಡುವುದು, ಇದರ ಜೊತೆಗೆ ರೈತರಿಂದ ನೇರವಾಗಿ ಗ್ರಾಹಕರಿಗೆ ಅಗತ್ಯ ವಸ್ತುಗಳನ್ನು ತಲುಪಿಸುವ ಸಂಸ್ಥೆಯಾಗಿ ನಮ್ಮ “ನಳ ಆರ್ಗಾನಿಕ್ ಸಂಸ್ಥೆ” ಮುಂಚೂಣಿಯಲ್ಲಿದ್ದು ರೈತಾಪಿ ಜನರು ಹಾಗೂ ಗ್ರಾಹಕರ ನಡುವೆ ಪ್ರಮುಖ ಕೊಂಡಿಯಾಗಿ ಕಾರ್ಯಕ್ಕಿಳಿದಿದೆ. ಇಂದು ಜನರ ಆರೋಗ್ಯವು ಶುದ್ಧ ಆಹಾರ ಉತ್ಪನ್ನಗಳಲ್ಲಿ ಅಡಗಿರುವುದರಿಂದಾಗಿ ಜನರ ಜೀವ ಮತ್ತು ಜೀವನದಲ್ಲಿ ಸ್ವಾಧಭರಿತ ಮತ್ತು ಉತ್ಕೃಷ್ಟ ಶಕ್ತಿಭರಿತ ಆಹಾರ ಪೂರೈಕೆಗೆ ಒತ್ತು ನಮ್ಮ ಆಧ್ಯ ಕರ್ತವ್ಯವಾಗಿದೆ. ಗ್ರಾಹಕರ ಸಂಪರ್ಕಕ್ಕಾಗಿ ನಮ್ಮ ವಿಳಾಸ ಅಥವಾ ನಿಮಗೆ ಅಗತ್ಯವೆನಿಸಿದ ವಸ್ತುಗಳ ಖರೀಧಿಗಾಗಿ ಪೂರಕ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸ ಹೀಗಿದೆ.